ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ ಪರಿಣಾಮ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಾಕಾರದಲ್ಲಿ ಸ್ಪರ್ಶನ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ರೂಪು ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ರಸ ಹುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಗಂಧ ಹುಟ್ಟಿತ್ತು ನೋಡಾ.
ಇದಕ್ಕೆ ಶಿವಲಿಂಗಾಗಮೇ:
``ಓಂಕಾರ ಜ್ಯೋತಿರೂಪೇ ಚ ಪರಿಣಾಮಂ ಚ ಜಾಯತೇ |
ಓಂಕಾರ ದರ್ಪಣಾಕಾರೇ ಶಬ್ದಶ್ಚೈವ ಸಜಾಯತೇ ||
ಓಂಕಾರೇಚಾರ್ಧಚಂದ್ರೇ ಚ ಸ್ಪರ್ಶನಂ ಚ ಸಜಾಯತೇ |
ಓಂಕಾರಕುಂಡಲಾಕಾರೇ ರೂಪಂ ಚೈವ ಸಜಾಯತೇ |
ಓಂಕಾರದಂಡಕರೂಪೇ ಚ ರಸಂ ಚೈವ ಸಜಾಯತೇ |
ಓಂಕಾರತಾರಕಾರೂಪೇ ಗಂಧಂ ಚೈವ ಸಜಾಯತೇ |
ಇತಿ ಷಡ್ಗುಣದ್ರವ್ಯಂ ಸ್ಥಾನೇ ಸ್ಥಾನೇ ಸಮುದ್ಭವಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Akhaṇḍa jyōtirmayavāgiha paramōṅkāra praṇavada
jyōtisvarūpadalli pariṇāma huṭṭittu.
Ā praṇavada darpaṇākāradalli śabda huṭṭittu.
Ā praṇavada ardhacandrākāradalli sparśana huṭṭittu.
Ā praṇavada kuṇḍalākāradalli rūpu huṭṭittu.
Ā praṇavada daṇḍakasvarūpadalli rasa huṭṭittu.
Ā praṇavada tārakasvarūpadalli gandha huṭṭittu nōḍā.
Idakke śivaliṅgāgamē:
``Ōṅkāra jyōtirūpē ca pariṇāmaṁ ca jāyatē |
Ōṅkāra darpaṇākārē śabdaścaiva sajāyatē ||
ōṅkārēcārdhacandrē ca sparśanaṁ ca sajāyatē |
ōṅkārakuṇḍalākārē rūpaṁ caiva sajāyatē |
ōṅkāradaṇḍakarūpē ca rasaṁ caiva sajāyatē |
ōṅkāratārakārūpē gandhaṁ caiva sajāyatē |
iti ṣaḍguṇadravyaṁ sthānē sthānē samudbhavaṁ ||''
intendudāgi, apramāṇakūḍalasaṅgamadēvā.