Index   ವಚನ - 522    Search  
 
ಪೃಥ್ವಿಯಲ್ಲಿ ಗಂಧವಿಹುದು, ಅಪ್ಪುವಿನಲ್ಲಿ ರಸವಿಹುದು, ತೇಜದಲ್ಲಿ ರೂಪವಿಹುದು, ವಾಯುವಿನಲ್ಲಿ ಸ್ಪರ್ಶವಿಹುದು, ಆಕಾಶದಲ್ಲಿ ಶಬ್ದವಿಹುದು, ತೃಪ್ತಿಯಲ್ಲಿ ಆತ್ಮನೆಂಬ ಮಹಾಭೂತಾಶ್ರಯವಾಗಿಹುದು ನೋಡಾ. ಇದಕ್ಕೆ ಶಿವಪ್ರಕಾಶಾಗಮೇ: ಸುಗಂಧಃ ಪೃಥ್ವೀಮಾಶ್ರಿತ್ಯ ಸುರಸೋ ಜಲಮಾಶ್ರಿತಾಃ | ರೂಪ ತೇಜ ಆಶ್ರಿತ್ಯ ಸ್ಪರ್ಶನಂ ವಾಯುಮಾಶ್ರಿತಂ || ಶಬ್ದಮಾಕಾಶಮಾಶ್ರಿತ್ಯ ಆತ್ಮಾ ಚ ತೃಪ್ತಿ ಆಶ್ರಯಾಃ | ಇತಿ ಷಡಿಂದ್ರಿಯಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.