ಭಕ್ತನಲ್ಲಿಯ ಪ್ರಸಾದಿಗೆ ಪೃಥ್ವಿಯಲ್ಲಿಯ ಅಗ್ನಿಯೇ ಅಂಗ.
ಆ ಅಂಗಕ್ಕೆ ಸುಚಿತ್ತದಲ್ಲಿಯ ನಿರಹಂಕಾರವೇ ಹಸ್ತ,
ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಶಿವಲಿಂಗವೇ ಲಿಂಗ.
ಆ ಶಿವಲಿಂಗಮುಖದಲ್ಲಿ ಚಿಗುರು ಮೊದಲಾದ ಪತ್ರೆಯ ಗಂಧದ್ರವ್ಯಮಂ
ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Bhaktanalliya prasādige pr̥thviyalliya agniyē aṅga.
Ā aṅgakke sucittadalliya nirahaṅkāravē hasta,
ā hastakke ācāraliṅgadalliya śivaliṅgavē liṅga.
Ā śivaliṅgamukhadalli ciguru modalāda patreya gandhadravyamaṁ
samarpaṇava māḍi tr̥ptiyane bhōgisuvanu nōḍā
apramāṇakūḍalasaṅgamadēvā.