ಭಕ್ತನಲ್ಲಿಯ ಶರಣಂಗೆ ಪೃಥ್ವಿಯಲ್ಲಿಯ ಆಕಾಶವೇ ಅಂಗ.
ಆ ಅಂಗಕ್ಕೆ ಸುಚಿತ್ತದಲ್ಲಿಯ ಸುಜ್ಞಾನವೇ ಹಸ್ತ.
ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ.
ಆ ಪ್ರಸಾದಲಿಂಗಮುಖದಲ್ಲಿ ಕಾಯಿ ಮೊದಲಾದ ಗಂಧದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Bhaktanalliya śaraṇaṅge pr̥thviyalliya ākāśavē aṅga.
Ā aṅgakke sucittadalliya sujñānavē hasta.
Ā hastakke ācāraliṅgadalliya prasādaliṅgavē liṅga.
Ā prasādaliṅgamukhadalli kāyi modalāda gandhadravyavanu
samarpaṇavaṁ māḍi tr̥ptiyane bhōgisuvanu nōḍā
apramāṇakūḍalasaṅgamadēvā.