ಭಕ್ತನಲ್ಲಿಯ ಪ್ರಾಣಲಿಂಗಿಗೆ ಪೃಥ್ವಿಯಲ್ಲಿಯ ವಾಯುವೇ ಅಂಗ.
ಆ ಅಂಗಕ್ಕೆ ಸುಚಿತ್ತದಲ್ಲಿಯ ಸುಮನವೇ ಹಸ್ತ.
ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ.
ಆ ಜಂಗಮಲಿಂಗಮುಖದಲ್ಲಿ ಮೊಗ್ಗೆ ಮೊದಲಾದ ಗಂಧದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ.
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Bhaktanalliya prāṇaliṅgige pr̥thviyalliya vāyuvē aṅga.
Ā aṅgakke sucittadalliya sumanavē hasta.
Ā hastakke ācāraliṅgadalliya jaṅgamaliṅgavē liṅga.
Ā jaṅgamaliṅgamukhadalli mogge modalāda gandhadravyavanu
samarpaṇavaṁ māḍi tr̥ptiyane bhōgisuvanu nōḍā.
Apramāṇakūḍalasaṅgamadēvā.