ಆ ಪ್ರಸಾದಿಯಲ್ಲಿಯ ಪ್ರಾಣಲಿಂಗಿಗೆ
ಅಗ್ನಿಯಲ್ಲಿಯ ವಾಯುವೇ ಅಂಗ.
ಆ ಲಿಂಗಕ್ಕೆ ನಿರಹಂಕಾರದಲ್ಲಿಯ ಸುಮನವೆ ಹಸ್ತ.
ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಜಂಗಮಲಿಂಗವೆ ಲಿಂಗ.
ಆ ಜಂಗಮಲಿಂಗಮುಖದಲ್ಲಿ
ಮಾಂಜಿಷ್ಟವರ್ಣವಾದ ರೂಪದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ
ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā prasādiyalliya prāṇaliṅgige
agniyalliya vāyuvē aṅga.
Ā liṅgakke nirahaṅkāradalliya sumanave hasta.
Ā hastakke śivaliṅgadalliya jaṅgamaliṅgave liṅga.
Ā jaṅgamaliṅgamukhadalli
mān̄jiṣṭavarṇavāda rūpadravyavanu
samarpaṇavaṁ māḍi tr̥ptiyane
bhōgisuvanu nōḍā
apramāṇakūḍalasaṅgamadēvā.