ನಾಮರೂಪಕ್ರಿಯಾತ್ಮಕವಾಗಿಹ ಪರವಸ್ತುಲಿಂಗ ತಾನೆ
ತನ್ನ ಲೀಲಾವಿನೋದಕ್ಕೆ ಅಂಗಸ್ಥಲದಲ್ಲಿ ನಾಮ-ರೂಪ-ಕ್ರಿಯಾತ್ಮನಾಗಿ
ಪ್ರತಿಷ್ಠಿಸಲುಪಟ್ಟುದಾಗಿ ಎಲ್ಲಾ ಮುಖಂಗಳೂ
ತನ್ನ ಮುಖಂಗಳುಳ್ಳದಾಗಿ ತೋರುತ್ತಿಹುದು ನೋಡಾ.
ಇದಕ್ಕೆ ಶಿವಲಿಂಗಾಗಮೇ:
ಏಕಮೇವ ಪರಂ ಲಿಂಗಂ ಅಂಗ್ದೇಸ್ಮಿನ್ ಸುಪ್ರತಿಷ್ಠಿತಂ |
ಸರ್ವತೋ ಮುಖಮಾಭಾತಿ ನಾಮರೂಪಕ್ರಿಯಾತ್ಮನಾ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nāmarūpakriyātmakavāgiha paravastuliṅga tāne
tanna līlāvinōdakke aṅgasthaladalli nāma-rūpa-kriyātmanāgi
pratiṣṭhisalupaṭṭudāgi ellā mukhaṅgaḷū
tanna mukhaṅgaḷuḷḷadāgi tōruttihudu nōḍā.
Idakke śivaliṅgāgamē:
Ēkamēva paraṁ liṅgaṁ aṅgdēsmin supratiṣṭhitaṁ |
sarvatō mukhamābhāti nāmarūpakriyātmanā ||''
intendudāgi, apramāṇakūḍalasaṅgamadēvā.