ತಾನೆ ಗುರುತತ್ವ, ತಾನೆ ಶಿವತತ್ವ, ತಾನೆ ಪರತತ್ವ
ತಾನಲ್ಲದೆ ಬೇರೆ ಪರಬ್ರಹ್ಮವುಂಟೆಂಬ
ಭ್ರಾಂತುಭ್ರಮಿತರ ನಾನೇನೆಂಬೆನಯ್ಯಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tāne gurutatva, tāne śivatatva, tāne paratatva
tānallade bēre parabrahmavuṇṭemba
bhrāntubhramitara nānēnembenayyā,
apramāṇakūḍalasaṅgamadēvā.