ಆದಿ ಅನಾದಿಯಿಲ್ಲದಂದು
ತಾನೆ ಪ್ರಣವಸ್ವರೂಪನು.
ಅನಂತ ಬ್ರಹ್ಮಾಂಡವಿಲ್ಲದಂದು
ತಾನೆ ನಾದಬಿಂದುಕಲಾತೀತನು.
ಜೀವಪರಮರಿಲ್ಲದಂದು
ತಾನೆ ನಾಮ ಸ್ವರೂಪ ಕ್ರಿಯಾತೀತನು.
ಸಚರಾಚರಂಗಳೆಲ್ಲಾ ರಚನೆಗೆ ಬಾರದಂದು
ತಾನೆ ಅಖಂಡಪರಿಪೂರ್ಣ
ಅಪ್ರಮೇಯ ಅಗೋಚರ ಅಪ್ರಮಾಣ
ಅನಂತ ತೇಜೋಮಯವಾಗಿಹ
ಮಹಾಘನಲಿಂಗ ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ādi anādiyilladandu
tāne praṇavasvarūpanu.
Ananta brahmāṇḍavilladandu
tāne nādabindukalātītanu.
Jīvaparamarilladandu
tāne nāma svarūpa kriyātītanu.
Sacarācaraṅgaḷellā racanege bāradandu
tāne akhaṇḍaparipūrṇa
apramēya agōcara apramāṇa
ananta tējōmayavāgiha
mahāghanaliṅga nōḍā,
apramāṇakūḍalasaṅgamadēvā