Index   ವಚನ - 599    Search  
 
ಗಂಗಾಧರ ಗೌರೀಶ ದೇವರಲ್ಲ, ಶಂಕರ ಶಶಿಧರ ದೇವರಲ್ಲ, ಪಂಚಮುಖ, ದಶಭುಜವನುಳ್ಳ ನಂದಿವಾಹನರು ದೇವರಲ್ಲ, ತ್ರಿಶೂಲ ಖಟ್ವಾಂಗಧರರು ದೇವರಲ್ಲ. ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ ಹಿಡಿದ ಪ್ರಳಯಕಾಲರುದ್ರ ದೇವರಲ್ಲ, ನಿರಾಳಸ್ವಯಂಭುಲಿಂಗವ ತಾನೆಂದರಿದಡೆ ತಾನೆ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.