Index   ವಚನ - 600    Search  
 
ನಾಸಿಕದ ತುದಿಯಲ್ಲಿ ಆಡುವ ಪ್ರಾಣಾವಾಯು ದೇವರೆಂಬರು; ಅಲ್ಲಲ್ಲ ನೋಡಾ. ಅದೆಂತೆಂದಡೆ: ಆ ಪ್ರಾಣವಾಯು ನಾಸಿಕದಿಂದ ಹನ್ನೆರಡಂಗುಲಪ್ರಮಾಣ, ಹೊರಹೊಂಟು ಎಂಟಂಗುಲ ಪ್ರಮಾಣ, ತಿರುಗಿ ನಾಲ್ಕಂಗುಲ ಪ್ರಮಾಣ ಖಂಡಿಸುವುದು ನೋಡಾ. ಇಂತು ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಶ್ವಾಸಂಗಳು ಹೊರಹೊಂಟು, ಹದಿನಾಲ್ಕುಸಾವಿರದ ನಾನೂರು ಶ್ವಾಸಂಗಳು ತಿರುಗಿ, ಏಳುಸಾವಿರದ ಇನ್ನೂರು ಶ್ವಾಸಂಗಳು ಖಂಡಿಸಿ ಮೃತವಾಗಿ ಹೋಹ ಪ್ರಾಣವಾಯುವ ದೇವರೆಂಬ ಶಿವದ್ರೋಹಿಗಳ ಎನಗೊಮ್ಮೆ ತೋರದಿರಯ್ಯಾ, ಅಪ್ರಮಾಣಕೂಡಲಸಂಗಮದೇವಾ.