Index   ವಚನ - 612    Search  
 
ಇನ್ನು ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವೇ ಮೂರ್ತಿಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ದಂಡಸ್ವರೂಪವೆ ಪಿಂಡಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವೆ ಕಲಾಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಾಕಾರವೆ ಬ್ರಹ್ಮಾನಂದ ಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ದರ್ಪಣಾಕಾರವೆ ವಿಜ್ಞಾನಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವೆ ಪರಬ್ರಹ್ಮವು. ಈ ಆರು ಷಟ್ಸ್ಥಲಬ್ರಹ್ಮ ನೋಡಾ. ಇದಕ್ಕೆ ನಿರಂಜನಾತೀತಾಗಮೇ: ಓಂಕಾರ ತಾರಕಂ ರೂಪಂ ಮೂರ್ತಿಬ್ರಹ್ಮ ಯಥಾ ಭವೇತ್ | ಓಂಕಾರ ದಂಡರೂಪೇ ಚ ಪಿಂಡಬ್ರಹ್ಮೇತಿ ಕಥ್ಯತೇ || ಓಂಕಾರ ಕುಂಡಲಾಕಾರಂ ಕಲಾಬ್ರಹ್ಮೇತಿ ಕೀರ್ತಿತಂ | ಓಂಕಾರಂ ಅರ್ಧಚಂದ್ರಂ ಚ ಬ್ರಹ್ಮಾನಂದಂ ತಥಾ ಭವೇತ್ || ಓಂಕಾರಂ ದರ್ಪಣಾಕಾರಂ ವಿಜ್ಞಾನಬ್ರಹ್ಮ ಉಚ್ಯತೇ | ಓಂಕಾರಂ ಜ್ಯೋತಿರೂಪಂ ಚ ಪರಬ್ರಹ್ಮ ಯಥಾ ಭವೇತ್ || ಪ್ರಣವಂ ಷಡ್ವಿಧಂ ಚೈವ ಷಟ್ಸ್ಥಲಬ್ರಹ್ಮ ಉಚ್ಯತೇ | ಇತಿ ಷಟ್‍ಬ್ರಹ್ಮ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.