Index   ವಚನ - 614    Search  
 
ಆ ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ ಪರಬ್ರಹ್ಮದಲ್ಲಿ ಶಿವನುತ್ಪತ್ಯವಾದನು, ಕ್ಷೇತ್ರಜ್ಞನುತ್ಪತ್ಯವಾದನು, ಕರ್ತೃ ಉತ್ಪತ್ಯವಾದನು, ಭಾವವುತ್ಪತ್ಯವಾಯಿತ್ತು, ಚೈತನ್ಯನುತ್ಪತ್ಯವಾದನು, ಆಕಾಶವುತ್ಪತ್ಯವಾಯಿತ್ತು. ಈ ಆರು ತತ್ವಂಗಳು ಪರಬ್ರಹ್ಮದಲ್ಲಿ ಹುಟ್ಟಿತ್ತು ನೋಡಾ. ಇದಕ್ಕೆ ನಿರಂಜನಾಗಮೇ: ಶಿವಂ ಕ್ಷೇತ್ರಜ್ಞಕರ್ತಾರಂ ಭಾವಂ ಚೈತನ್ಯಮಂತರಂ | ಏವಂತು ಷಡ್ವಿಧಂ ಪ್ರೋಕ್ತಂ ಪರಬ್ರಹ್ಮ ಚ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.