Index   ವಚನ - 618    Search  
 
ಆ ಅಖಂಡಮಹಾಜ್ಯೋತಿಪ್ರಣವದ ದಂಡಕಸ್ವರೂಪವಾಗಿಹ ಪಿಂಡಬ್ರಹ್ಮದಲ್ಲಿ ವಿಷ್ಣು, ಅಪ್ಪು, ರಸ, ಬುದ್ಧಿ, ಜಿಹ್ವೆ, ಗುಹ್ಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ: ವಿಷ್ಣುರಾಪೋ ರಸೋ ಬುದ್ಧಿಃ ಜಿಹ್ವಾ ಗುಹ್ಯಸ್ತಥೈವ ಚ | ಷಟ್‍ತತ್ವಮಿದಂ ಪ್ರೋಕ್ತಂ ಪಿಂಡಬ್ರಹ್ಮೇತಿ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.