Index   ವಚನ - 620    Search  
 
ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ಸಹಸ್ರಾಂಶದಲ್ಲಿ ಚಿಚ್ಛಕ್ತಿ ಹುಟ್ಟಿದಳು. ಆ ಚಿತ್‍ಶಕ್ತಿಯ ಸಹಸ್ರಾಂಶದಲ್ಲಿ ಪರಾಶಕ್ತಿ ಹುಟ್ಟಿದಳು. ಆ ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿ ಹುಟ್ಟಿದಳು. ಆ ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿ ಹುಟ್ಟಿದಳು. ಆ ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿ ಹುಟ್ಟಿದಳು. ಆ ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿ ಹುಟ್ಟಿದಳು ನೋಡಾ. ಇದಕ್ಕೆ ಮಹಾವಾತುಲಾಗಮೇ: ``ಚಿಂತಾಶಕ್ತಿಸಹಸ್ರಾಂಶೇ ಚಿಚ್ಛಕ್ತಿಶ್ಚ ಸಮುದ್ಭವಃ | ಚಿಚ್ಛಕ್ತಿಶ್ಚ ಸಹಸ್ರಾಂಶೇ ಪರಶಕ್ತಿಶ್ಚ ಸಮುದ್ಭವಃ || ಪರಶಕ್ತಿ ಸಹಸ್ರಾಂಶೇ ಆದಿಶಕ್ತಿ ಸಮುದ್ಭವಾಃ | ಆದಿಶಕ್ತಿಶ್ಚ ಸಹಸ್ರಾಂಶೇ ಇಚ್ಛಾಶಕ್ತಿ ಸಮುದ್ಭವಃ | ಇಚ್ಛಾಶಕ್ತಿ ಸಹಸ್ರಾಂಶೇ ಜ್ಞಾನಶಕ್ತಿಶ್ಚ ಸಮುದ್ಭವಃ | ಏಕೈಕಂ ಪ್ರಣವಾಖ್ಯಾತಂ ಏಕೈಕಂ ಕುಸುಮಾಹಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.