Index   ವಚನ - 622    Search  
 
ಇನ್ನು ಷಡಂಗ ಉತ್ಪತ್ಯವದೆಂತೆಂದಡೆ: ಬ್ರಹ್ಮ ವಿಷ್ಣು ರುದ್ರ ಈಶ್ವರ ಶಿವ ಸದಾಶಿವ ಈ ಆರು ಶಿವಾಂಗವು ಚಿಚ್ಛಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ | ಶಿವಂ ಶಿವಾಂಗಮಿತ್ಯೇತತ್ ಚಿಚ್ಛಕ್ತಿಶ್ಚೈವ ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.