ಶಿವತತ್ವದ ವಾಯುವಿನ ಮೇಲೆ ನಿರಾಳ ಅನಾಹತಚಕ್ರ.
ಅಲ್ಲಿಯ ಪದ್ಮ ಇನ್ನೂರಾ ಎಪ್ಪತ್ತು ದಳದ ಪದ್ಮ.
ಆ ಪದ್ಮ ವರ್ಣವಿಲ್ಲದೆ ಅಪ್ರಮಾಣ ಅಗೋಚರವಾಗಿಹುದು.
ಅಲ್ಲಿಯ ಅಕ್ಷರ ಇನ್ನೂರಾ ಎಪ್ಪತ್ತಕ್ಷರ;
ಆ ಅಕ್ಷರ ನಿರೂಪಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಳ ಉಪಮಾಶಕ್ತಿ.
ಅಮಲಾನಂದಬ್ರಹ್ಮವೇ ಅಧಿದೇವತೆ.
ಅಲ್ಲಿಯ ನಾದ ಸುನಾದ.
ಅಲ್ಲಿಯ ಬೀಜಾಕ್ಷರ ಆದಿಪ್ರಣವ ನೋಡಾ
ಅಪ್ರಮಾಣಕೂಡಲಸಂಗಮದೇವಾ.