ಇನ್ನು ನಿರಂಜನ ಷಡುಚಕ್ರಂಗಳ
ಮೇಲೆ ನಾಲ್ಕು ಚಕ್ರಂಗಳುಂಟು.
ಅದೆಂತೆಂದಡೆ:
ರಹಸ್ಯಕ್ಕೂ ಅತ್ಯಂತ ರಹಸ್ಯವಾಗಿಹುದು.
ಸೂಕ್ಷ್ಮಕ್ಕೂ ಅತ್ಯಂತ ಸೂಕ್ಷ್ಮವಾಗಿಹುದು.
ಶೂನ್ಯಕ್ಕೂ ಅತ್ಯಂತ ಶೂನ್ಯವಾಗಿಹುದು.
ಉಪಮೆಗೂ ಉಪಮಾತೀತವಾಗಿಹುದುಯೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.