ನಿರಂಜನಾತೀತ ಭಕ್ತ, ನಿರಂಜನಾತೀತ ಮಹೇಶ್ವರ,
ನಿರಂಜನಾತೀತ ಪ್ರಸಾದಿ, ನಿರಂಜನಾತೀತ ಪ್ರಾಣಲಿಂಗಿ,
ನಿರಂಜನಾತೀತ ಶರಣ, ನಿರಂಜನಾತೀತ ಐಕ್ಯ.
ಈ ನಿರಂಜನಾತೀತ ಷಡುಸ್ಥಲಬ್ರಹ್ಮವು
ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ ಅಗಮ್ಯ
ವಾಚಾತೀತಮಗೋಚರಕತ್ತತ್ತವಾಗಿಹುದು
ನಿರಂಜನಾತೀತ ಷಡುಸ್ಥಲಬ್ರಹ್ಮ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niran̄janātīta bhakta, niran̄janātīta mahēśvara,
niran̄janātīta prasādi, niran̄janātīta prāṇaliṅgi,
niran̄janātīta śaraṇa, niran̄janātīta aikya.
Ī niran̄janātīta ṣaḍusthalabrahmavu
akhaṇḍita apramāṇa agōcara apramēya agamya
vācātītamagōcarakattattavāgihudu
niran̄janātīta ṣaḍusthalabrahma nōḍā
apramāṇakūḍalasaṅgamadēvā.