Index   ವಚನ - 658    Search  
 
ನಿರಂಜನಾತೀತಪ್ರಾಣಲಿಂಗಿಗೆ ನಿರಂಜನಾತೀತವೇ ಅಂಗ, ನಿರಂಜನಾತೀತವೇ ಹಸ್ತ, ನಿರಂಜನಾತೀತವೇ ಜಂಗಮಲಿಂಗ, ನಿರಂಜನಾತೀತವೆಂಬ ಮುಖದಲ್ಲಿ, ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ. ಅಪ್ರಮಾಣಕೂಡಲಸಂಗಮದೇವಾ.