Index   ವಚನ - 660    Search  
 
ನಿರಂಜನಾತೀತ ಐಕ್ಯಂಗೆ ನಿರಂಜನಾತೀತವೇ ಅಂಗ, ನಿರಂಜನಾತೀತವೇ ಹಸ್ತ, ನಿರಂಜನಾತೀತವೆ ಮಹಾಲಿಂಗ. ನಿರಂಜನಾತೀತವೆಂಬ ಮುಖದಲ್ಲಿ ನಿರಂಜನಾತೀತಾನಂದವೆಂಬ ಸುಖವ ಸಮರ್ಪಣಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.