Index   ವಚನ - 664    Search  
 
ಇನ್ನು ಮಧ್ಯಾವಸ್ಥೆಯ ದರ್ಶನವದೆಂತೆಂದಡೆ: ಜಾಗ್ರತದಲ್ಲಿಯ ಅತೀತವಾವುದು? ಮುಂದೆ ಕಂಡವನ ಈಗ ಅರಿಯದಿಪ್ಪುದು ಜಾಗ್ರದಲ್ಲಿ ಅತೀತವು. ಜಾಗ್ರದಲ್ಲಿಯ ತುರಿಯವಾವುದು? ಪುರುಷ ತತ್ತ್ವದೊಡನೆ ಪ್ರಾಣವಾಯು ಕೂಡಿಕೊಂಡು ಇವನರಿಯದ ಹಾಂಗೆ ಉಸುರು ಬಿಡುವುದು ಜಾಗ್ರದಲ್ಲಿಯ ತುರೀಯ ನೋಡಾ ಅಪ್ರಮಾಣಕೂಡಲಸಂಗಮದೇವಾ.