Index   ವಚನ - 663    Search  
 
ಇನ್ನು ಪ್ರೇರಕಾವಸ್ಥೆಯ ದರ್ಶನವದೆಂತೆಂದಡೆ: ಶಿವತತ್ತ್ವವೈದು, ಕಲಾದಿಗಳೇಳು, ಕರಣ ನಾಲ್ಕು, ಜ್ಞಾನೇಂದ್ರಿಯಂಗಳಲ್ಲಿ ಶ್ರೋತ್ರ ಒಂದು, ಭೂತಂಗಳಲ್ಲಿ ಆಕಾಶ ಒಂದು, ಈ ಹದಿನೆಂಟು ಕರಣಂಗಳೊಡನೆ ಕೂಡಿ, ಶಬ್ದವ ಕೇಳುವ ಅವಸರ ಮತ್ತಂ ಉಂಟಾದ ಕರಣಂಗಳ ಕಂಡು ಕೊಂಬುದು ನೋಡಾ ಅಪ್ರಮಾಣಕೂಡಲಸಂಗಮದೇವಾ.