Index   ವಚನ - 669    Search  
 
ಇನ್ನು ಕೆಳಗಾದವಸ್ಥೆಯ ದರ್ಶನವದೆಂತೆಂದಡೆ: ಜಾಗ್ರವಾವುದು? ಶ್ರೋತ್ರಾದಿಗಳೈದು, ವಾಗಾದಿಗಳೈದು, ಶಬ್ದಾದಿಗಳೈದು, ವಚನಾದಿಗಳೈದು, ವಾಯು ಹತ್ತು, ಕರಣ ನಾಲ್ಕು, ಪುರುಷನೊಬ್ಬ- ಈ ಮೂವತ್ತೈದು ಕರಣಂಗಳೊಡನೆ ಭ್ರೂಮಧ್ಯದಲ್ಲಿ ದರ್ಶನವ ಮಾಡುವುದು ಜಾಗ್ರ ನೋಡಾ ಅಪ್ರಮಾಣಕೂಡಲಸಂಗಮದೇವಾ.