Index   ವಚನ - 670    Search  
 
ಸ್ವಪ್ನವಾವುದು? ಶ್ರೋತ್ರಾದಿಗಳೈದು, ವಾಗಾದಿಗಳೈದು -ಈ ಹತ್ತು ಕರಣಂಗಳು ಭ್ರೂಮಧ್ಯದಲ್ಲಿ ನಿಂದು ಶಬ್ದಾದಿಗಳೈದು, ವಚನಾದಿಗಳೈದು, ವಾಯು ಹತ್ತು , ಕರಣ ನಾಲ್ಕು, ಪುರುಷನೊಬ್ಬ- ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು ಗಗನಕ್ಕೆ ಹಾರುವ ಹಾಂಗೆ, ಮುಗಿಲಹತ್ತುವ ಹಾಂಗೆ, ನಾನಾ ವ್ಯಾಪಿಯಂ ಕಂಡ ಅವರ ಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.