ಸುಷುಪ್ತಿ ಯಾವುದು?
ವಚನಾದಿಗಳೈದು, ಶಬ್ದಾದಿಗಳೈದು, ಕರಣದಲ್ಲಿ ಚಿತ್ತವಲ್ಲದೆ ಮೂರು.
ದಶವಾಯುಗಳಲ್ಲಿ ಪ್ರಾಣವಾಯುವಲ್ಲದೆ, ವಾಯು ಒಂಬತ್ತು.
ಈ ಇಪ್ಪತ್ತುಮೂರು ಕರಣಂಗಳು ಕಂಠಸ್ಥಾನದಲ್ಲಿ ನಿಂದು
ಚಿತ್ತವನು, ಪ್ರಾಣವಾಯುವನು, ಪುರುಷನನು
ಈ ಮೂರು ಕರಣಂಗಳೊಡನೆ ಹೃದಯಸ್ಥಾನದಲ್ಲಿ ನಿಂದು,
ಅನೇಕ ಚಿಂತನೆಯ ಮಾಡುವುದು,
ಜಾಗ್ರದಲ್ಲಿ ನಿಂದರೆ ಹೇಳಲರಿಯದಿಪ್ಪುದು ಸುಷುಪ್ತಿ ನೋಡಾ
ಅಪ್ರಮಾಣಕೂಡಲಸಂಗಮದೇವಾ.