ನಾದ ಬಿಂದು ಸಾದಾಖ್ಯ ಈಶ್ವರ ಇಂಬಾಗಿ ನಿಂದು,
ವಚನಾದಿಗಳೈದು, ಶಬ್ದಾದಿಗಳೈದು, ಕರಣ ನಾಲ್ಕು,
ವಾಯು ಹತ್ತು, ಪುರುಷನೊಬ್ಬ-
ಈ ಇಪ್ಪತ್ತೈದು ಕರಣಂಗಳೊಡನೆ
ಕಂಠಸ್ಥಾನದಲ್ಲಿ ನಿಂದು ದರ್ಶನವಂ ಮಾಡುವುದು
ಪರಮಸ್ವಪ್ನ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nāda bindu sādākhya īśvara imbāgi nindu,
vacanādigaḷaidu, śabdādigaḷaidu, karaṇa nālku,
vāyu hattu, puruṣanobba-
ī ippattaidu karaṇaṅgaḷoḍane
kaṇṭhasthānadalli nindu darśanavaṁ māḍuvudu
paramasvapna nōḍā
apramāṇakūḍalasaṅgamadēvā.