Index   ವಚನ - 678    Search  
 
ಶಿವತತ್ವವೈದು ಇಂಬಾಗಿ ನಿಂದು ಪುರುಷನೊಬ್ಬ, ವಚನಾದಿಗಳೈದು, ಶಬ್ದಾದಿಗಳೈದು, ಕರಣ ನಾಲ್ಕು, ಶ್ರೋತ್ರಾದಿಗಳೈದು ಕರಣಂಗಳೊಡನೆ ಭ್ರೂಮಧ್ಯದಲ್ಲಿ ದರ್ಶನವ ಮಾಡುವುದು ಪರಮಜಾಗ್ರ ನೋಡಾ ಅಪ್ರಮಾಣಕೂಡಲಸಂಗಮದೇವಾ.