Index   ವಚನ - 686    Search  
 
ಅದಂಥಾದಿಂಥಾದೆಂದು ನೋಡುವ ರೂಪ ನಿರೂಪವ ಬಿಟ್ಟು ಅತ್ತತ್ತವಾಗಿ ಸ್ವಾನುಭೂತಿ ಬೆಳೆಯಲಿಕ್ಕಾಗಿ ಜ್ಞಾನಶಕ್ತಿ ನಷ್ಟವು. ಕೂಟಂಗಳು ಕೆಡಲು ಕ್ರಿಯಾಶಕ್ತಿ ನಷ್ಟವು. ವಿಕಾರ ನಿರ್ವಿಕಾರಂಗಳು ಕೆಟ್ಟು ಪರಮಾನಂದ ಸುಖವ ಅನುಭವಿಸಲು ಪರಶಕ್ತಿ ನಷ್ಟವು. ಹೀಂಗೆ ಅವಸ್ಥೆಗಳು ನಷ್ಟವು, ದರ್ಶನವದು ನಿತ್ಯ ನಿರಂಜನ ನಿರ್ಮಾಯ ನಿರಾಳ ನಿರಾಲಂಬವ ತಾನೆಂದು ತಿಳಿದ ಮಹಾಶರಣಂಗಲ್ಲದೆ ಮಿಕ್ಕಿನ ವೇಷಧಾರಿಗಳವರೆತ್ತ ಬಲ್ಲರು ನೋಡಾ ಅಪ್ರಮಾಣಕೂಡಲಸಂಗಮದೇವಾ.