Index   ವಚನ - 687    Search  
 
ಇನ್ನು ಜ್ಞಾನಾವಸ್ಥೆಯ ದರ್ಶನವದೆಂತೆಂದಡೆ: ತನ್ನ ತಾನರಿದು ಪರಮಜ್ಞಾನವ ತಿಳಿವುದೇ ಜ್ಞಾನಜಾಗ್ರ. ಆ ಪರಮಜ್ಞಾನ ನಿವಾಸಿಯಾಗಿಹುದೇ ಜ್ಞಾನಸ್ವಪ್ನ. ಆ ಪರಮಜ್ಞಾನ ನಿವಾಸದಲ್ಲಿ ಲೀಯವಾಗಿಹುದೇ ಜ್ಞಾನಸುಷುಪ್ತಿ. ಆ ಜ್ಞಾನಸುಷುಪ್ತಿಯಲ್ಲಿ ತಲೆದೋರಿದ ಸುಜ್ಞಾನವೇ ಜ್ಞಾನತೂರ್ಯ. ಆ ಸುಜ್ಞಾನವನ್ನೊಳಗೊಂಡ ನಿಃಶಬ್ದವೇ ಜ್ಞಾನವ್ಯೋಮ. ಆ ಜ್ಞಾನವ್ಯೋಮವನೊಳಗೊಂಡ ಮಹಾಜ್ಞಾನವೆ ಜ್ಞಾನವ್ಯೋಮಾತೀತವೆಂದು ಶ್ರುತಿಗಳು ಸಾರುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.