Index   ವಚನ - 702    Search  
 
ಇನ್ನು ಇನ್ನೂರ ಇಪ್ಪತ್ತುನಾಲ್ಕು ಭುವನಂಗಳ ಉತ್ಪತ್ಯವೆಂತೆಂದಡೆ: ಅಖಂಡ ಜ್ಯೋತಿರ್ಮಯವಾಗಿಹ ಮಹದೋಂಕಾರ ಪ್ರಣವದಲ್ಲಿ ಇನ್ನೂರು ಇಪ್ಪತ್ತುನಾಲ್ಕು ಭುವನ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಮಹಾಪ್ರಳಯಕಾಲರುದ್ರೋಪನಿಷತ್: ಮಹದೋಂಕಾರಪ್ರಣವದಲ್ಲಿ- ದ್ವಿಶತಶ್ಚತುರ್ವಿಂಶತಿಭುವನಾ ಭವಂತಿ | ಓಂ ಪ್ರಾಣವಾತ್ಮಾ ದೇವತಾ | ಓಂಕಾರೇ ಚ ಲಯಂ ಪ್ರಾಪ್ತೇ ಪಂಚವಿಂಶತ್ಪ್ರಣವಾಂಶಕೇ ||'' ಇಂತೆಂದು ಶ್ರುತಿ, ಅಪ್ರಮಾಣಕೂಡಲಸಂಗಮದೇವಾ.