ಇನ್ನು ಷಟ್ಕಲೆಗಳುತ್ಪತ್ಯವದೆಂತೆಂದಡೆ:
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಶಾಂತ್ಯತೀತೋತ್ತರಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿ ಪ್ರತಿಷ್ಠಾಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ನಿವೃತ್ತಿಕಲೆ ಉತ್ಪತ್ಯವಾಯಿತ್ತು.
ಅಂತು ಈ ಷಟ್ಕಲಾ ನಾಮಂಗಳು ಕಲಾಧ್ವ ನೋಡಾ.
ಇದಕ್ಕೆ ನಿಷ್ಕಲಾತೀತಾಗಮೇ:
ಓಂಕಾರ ಜ್ಯೋತಿರೂಪೇ ಚ ಮಹತಿರ್ಜಾಯತೇ ಕಲಾ |
ಓಂಕಾರ ದರ್ಪಣಾಕಾರೇ ಶಾಂತ್ಯತೀತಾ ಚ ಜಾಯತೇ ||
ಓಂಕಾರ ಅರ್ಧಚಂದ್ರೇ ಚ ಕಲಾಶಾಂತಿ ಚ ಜಾಯತೇ |
ಓಂಕಾರ ಕುಂಡಲಾಕಾರೇ ಕಲಾವಿದ್ಯಾ ಚ ಜಾಯತೇ |
ಓಂಕಾರ ದಂಡರೂಪೇ ಚ ಪ್ರತಿಷ್ಠಾ ಜಾಯತೇ ಕಲಾ ||
ಓಂಕಾರ ತಾರಕಾರೂಪೇ ನಿವೃತ್ತಿರ್ಜಾಯತೇ ಕಲಾ |
ಇತಿ ಷಷ್ಠಕಲಾದೇವೀ ಸ್ಥಾನಸ್ಥಾನೇಷು ಜಾಯತೇ || ''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaṭkalegaḷutpatyavadentendaḍe:
Akhaṇḍa jyōtirmayavāgiha gōḷakākārapraṇavada
jyōtisvarūpadalli śāntyatītōttarakale utpatyavāyittu.
Ā praṇavada darpaṇākāradalli śāntyatītakale utpatyavāyittu.
Ā praṇavada ardhacandrakadalli śāntikale utpatyavāyittu.
Ā praṇavada kuṇḍalākāradalli vidyākale utpatyavāyittu.
Ā praṇavada daṇḍasvarūpadalli pratiṣṭhākale utpatyavāyittu.
Ā praṇavada tārakasvarūpadalli nivr̥ttikale utpatyavāyittu.
Antu ī ṣaṭkalā nāmaṅgaḷu kalādhva nōḍā.
Idakke niṣkalātītāgamē:
Ōṅkāra jyōtirūpē ca mahatirjāyatē kalā |
ōṅkāra darpaṇākārē śāntyatītā ca jāyatē ||
ōṅkāra ardhacandrē ca kalāśānti ca jāyatē |
ōṅkāra kuṇḍalākārē kalāvidyā ca jāyatē |
ōṅkāra daṇḍarūpē ca pratiṣṭhā jāyatē kalā ||
ōṅkāra tārakārūpē nivr̥ttirjāyatē kalā |
iti ṣaṣṭhakalādēvī sthānasthānēṣu jāyatē ||''
intendudāgi,
apramāṇakūḍalasaṅgamadēvā.