•  
  •  
  •  
  •  
Index   ವಚನ - 106    Search  
 
ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ, ಅಚ್ಚುಗವಾಯಿತ್ತವ್ವಾ ನಮ್ಮ ನಲ್ಲಂಗೆ. ಕಿಚ್ಚನೆ ಹೊತ್ತುಕೊಂಡು ಅಚ್ಚನೆಯನಾಡಲು, ಅಚ್ಚುಗವಾಯಿತ್ತವ್ವಾ ನಮ್ಮ ನಲ್ಲಂಗೆ. ಅರ್ಚನೆಯ ಗಳಿಹವನಿಳುಹಿದಡೆ, ಬಳಿಕ ನಿಶ್ಚಿಂತವಾಯಿತ್ತು ಗುಹೇಶ್ವರಾ.
Transliteration Niccakke nicca otteya bēḍidaḍe, accugavāyittavvā nam'ma nallaṅge. Kiccane hottukoṇḍu accaneyanāḍalu, accugavāyittavvā nam'ma nallaṅge. Arcaneya gaḷihavaniḷuhidaḍe, baḷika niścintavāyittu guhēśvarā.
Hindi Translation हर रोज प्रार्थना करे तो अच्छा नहीं लगा हमारे प्रिय को। आग ढोकर अर्चना करने से, अच्छा लगा हमारे प्रिय को। सकाम अर्चना छोड़े तो बाद में निश्चिंत होगया गुहेश्वरा। Translated by: Eswara Sharma M and Govindarao B N
Tamil Translation நாள்தோறும் செல்வத்தை வேண்டினால் இலிங்கம் அதனை ஏற்பதில்லை ஞானம் வேண்டும் என அர்ச்சிப்பின் இலிங்கம் அதனை ஏற்கும் பயன் கருதாது அர்ச்சனை செயின் அவன் கவலையற்றிருப்பான் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಚ್ಚುಗವಾಯಿತ್ತವ್ವಾ = ನಿರಾಶೆಯಾಯಿತ್ತು, ಅವನಿಗೆ ಹಿಡಿಸದು; ಅರ್ಚನೆಯ ಗಳಿಹ = ಅರ್ಚನೆಯಿಂದ ಸಕಾಮ ಭಕ್ತನು ನಿರೀಕ್ಷಿಸುವ ಗಳಿಕೆ; ಕಿಚ್ಚು = ಜ್ಞಾನ; ಲಿಂಗದೇವನಿಗೆ ಯಾವುದು ಪ್ರಿಯ, ಯಾವುದು ಪ್ರಿಯವಲ್ಲ ಎಂಬ ತಿಳವಳಿಕೆ; ಭಕ್ತಿಯ ಪರಮ ಪ್ರಯೋಜನ ಯಾವುದು ಎಂಬುದರ ತಿ; ನಮ್ಮ ನಲ್ಲಂಗೆ = ಲಿಂಗದೇವನಿಗೆ; ನಿಚ್ಚಕ್ಕೆ ನಿಚ್ಚ ಒತ = ನಿತ್ಯ ನಿತ್ಯವೂ ಪೂಜಿಸಿ ಬೇಡಿದರೆ; Written by: Sri Siddeswara Swamiji, Vijayapura