Index   ವಚನ - 708    Search  
 
ಅಲ್ಲಿಂದ ಮೇಲೆ ಸ್ವಾಧಿಷ್ಠಾನಚಕ್ರದ ಷಡುದಳಪದ್ಮದ ಮಧ್ಯದಲ್ಲಿಹ ಮಂತ್ರ ವಾಮದೇವಮಂತ್ರ. ಅಲ್ಲಿಹ ಪದಂಗಳು- ಈಶಾನ್ಯ ಮೂರ್ಧ್ನಾಯ ತತ್ಪುರುಷ ವಕ್ತ್ರಾಯ ಅಘೋರ ಹೃದಯಾಯ ವಾಮದೇವ ಗುಹ್ಯಾಯ ಸದ್ಯೋಜಾತ ಮೂರ್ತಯೇ ಓಂ ನಮೋ ನಮಃ'' ಎಂಬ ಆರು ಪದ. ಅಲ್ಲಿಹ ವರ್ಣ ಬ ಭ ಮ ಯ ರ ಲ ಎಂಬ ಆರು ವರ್ಣವಿಹುದು. ಅಲ್ಲಿಹ ಭುವನ-ಸೂಕ್ಷ್ಮ , ವಾಮದೇವ, ಸತ್ಯಾನಂದ, ಸರ್ವೆಶ್ವರ, ಶಿವೋತ್ತಮ, ನಿತ್ಯಾನಂದ, ಏಕನೇತ್ರ, ಸದಾನಂದ, ಏಕರುದ್ರ, ನಿಜಾನಂದ, ತ್ರಿಮೂರ್ತಿ, ಶ್ರೀಕಂಠ, ಶಿಖಂಡಿ, ವಾಮಜೇಷ್ಠ, ರೌದ್ರಿ, ಕಲವಿಕರಣಿ, ಕಾಳಿ, ಬಲವಿಕರಣಿ, ಸರ್ವಭೂತದಮನಿ, ಬಲಪ್ರಮದಿನಿ, ಮನೋನ್ಮನಿ, ಅಂಗುಷ್ಠಮಾತ್ರಭುವನಿ, ಮಹಾಭುವನ, ಏಕಿಶಾನವೆಂಬ ಇಪ್ಪತ್ತುನಾಲ್ಕು ಭುವನ. ಅಲ್ಲಿಹ ತತ್ತ್ವ-ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚತತ್ತ್ವ. ಅಲ್ಲಿಹ ಕಲೆ, ಪ್ರತಿಷ್ಠಾಕಲೆ ನೋಡಾ ಅಪ್ರಮಾಣಕೂಡಲಸಂಗಮದೇವಾ.