Index   ವಚನ - 709    Search  
 
ಅಲ್ಲಿಂದ ಮೇಲೆ ಮಣಿಪೂರಕ ಚಕ್ರದ ದಶದಳಪದ್ಮದ ಮಧ್ಯದಲ್ಲಿಹ ಮಂತ್ರ ಅಘೋರಮಂತ್ರ. ಅಲ್ಲಿಹ ಪದ- ಗುಹ್ಯಾತಿ ಗುಹ್ಯಾಯ ಗೌಪ್ತೇ ಅಭಿಧಾನಾಯ ಸರ್ವಯೋಗಾಧಿಕೃತಾಯ ಜ್ಯೋತಿರೂಪಾಯ ಪರಮೇಶ್ವರ ಪರಾಯ ಚೇತನ ಅಚೇತನ ವ್ಯೋಮಿನ್ '' ಎಂಬ ಹತ್ತು ಪದ. ಅಲ್ಲಿಹ ವರ್ಣ-ಡ ಢ ಣ ತ ಥ ದ ಧ ನ ಪ ಫ ಎಂಬ ಹತ್ತು ವರ್ಣ. ಅಲ್ಲಿಹ ಭುವನ-ಏಕ, ಪಿಂಗಳೇಕ್ಷಣ, ಉದ್ಭವ, ಭವ, ವಾಮದೇವ, ಮಹಾದೇವ, ಶಿಭೇದ, ಏಕವೀರ, ಪಂಚಾಂತಕ, ಶೂರ, ಸಂವರ್ತನ, ಜ್ಯೋತಿ, ಚಂಡ, ಕ್ರೋಧ, ಆನಂದ, ಏಕನೇಕ, ಭವ್ಯ, ಮಂಗಳ, ಅಜ, ಉಮಾಪತಿ, ಏಕಧೀರ, ಪ್ರಚಂಡ, ಈಶಾನ, ಉಗ್ರ, ಭೀಮ, ಭೌಮ, ಕೌಮಾರಿ, ವೈಷ್ಣವ, ಬ್ರಾಹ್ಮಣ, ರೈಭವ, ಕೃತ, ಶಾಕೃತ, ಯಾಮ್ಯ, ಪ್ರಜೇಶ, ಸೌಮ್ಯ, ಇಂದ್ರ, ಗಾಂಧರ್ವ, ಯಕ್ಷ, ರಾಕ್ಷಸ, ಪೈಶಾಚಿಕ ಎಂಬ ನಲ್ವತ್ತು ಭುವನ. ಅಲ್ಲಿಹ ತತ್ತ್ವ-ವಾಕು, ಪಾಣಿ, ಪಾದ, ಪಾಯು, ಗುಹ್ಯವೆಂಬ ಪಂಚತತ್ತ್ವ. ಅಲ್ಲಿಹ ಕಲೆ ವಿದ್ಯಾಕಲೆ ನೋಡಾ ಅಪ್ರಮಾಣಕೂಡಲಸಂಗಮದೇವಾ.