Index   ವಚನ - 717    Search  
 
ವ್ಯೋಮವ್ಯಾಪಿ ಮೊದಲಾಗಿ ಓಂಕಾರವೆಂಬ ಪದ ಕಡೆಯಾಗಿ ಈ ತೊಂಬತ್ನಾಲ್ಕು ವ್ಯೋಮವ್ಯಾಪಿಪದಂಗಳು ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿ ಮಹಾಜ್ಯೋತಿರ್ಮಯಲಿಂಗದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಚತುಃಷಷ್ಠಿಪದಂ ಚೈವ ದಶವಿಂಶತ್ಪದಂ ತಥಾ | ಇತಿ ಪದಾಧ್ವಕಂ ದೇವಿ ಲಿಂಗಗರ್ಭೆ ವಿಲೀಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.