Index   ವಚನ - 730    Search  
 
ಇನ್ನು ಷಡಂಗನಿವೈತ್ತಿ ಅದೆಂತೆಂದಡೆ: ಶಿವ ಸದಾಶಿವ ಈಶ್ವರ ರುದ್ರ ವಿಷ್ಣು ಬ್ರಹ್ಮ ಈ ಆರು ಶಿವಾಂಗವು ಚಿಚ್ಛಕ್ತಿಯಲ್ಲಿ ಅಡಗಿತ್ತು ನೋಡಾ. ಇದಕ್ಕೆ ನಿಃಕಲಾತೀತಾಗಮೇ: ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ | ಶಿವಂ ಶಿವಾಂಗಮಿತ್ಯೇತೇ ಚಿದ್ರೂಪೇ ಚ ವಿಲೀಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.