Index   ವಚನ - 734    Search  
 
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಚೇತನ ಈ ಆರು ವಿದ್ಯಾಂಗವು ಜ್ಞಾನಶಕ್ತಿಯಲ್ಲಿ ಅಡಗಿತ್ತು ನೋಡಾ. ಇದಕ್ಕೆ ನಿಃಕಲಾತೀತಾಗಮೇ: ಘ್ರಾಣಂ ಜಿಹ್ವಾ ಚ ನೇತ್ರಂ ಚ ತ್ವಕ್ ಶ್ರೋತ್ರಂ ಚೇತನಂ ವಿದಃ | ಷಣ್ಣಾಂ ವಿದ್ಯಾಂಗಮೇವೇತಿ ಜ್ಞಾನಶಕ್ತಿಷು ಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.