Index   ವಚನ - 733    Search  
 
ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನ ಭಾವ ಈ ಆರು ಕಾಮಾಂಗವು ಇಚ್ಛಾಶಕ್ತಿಯಲ್ಲಿ ಅಡಗಿತ್ತು ನೋಡಾ. ಇದಕ್ಕೆ ನಿಃಕಲಾತೀತಾಗಮೇ: ಚಿತ್ತಂ ಬುದ್ಧಿರಹಂಕಾರಂ ಮನೋ ಜ್ಞಾನಂ ಚ ಭಾವಕಂ | ಷಟ್ ಕಾಮಾಂಗಮಿದಂ ಪ್ರೋಕ್ತಂ ಇಚ್ಛಾರೂಪೇ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.