Index   ವಚನ - 738    Search  
 
ಪರಬ್ರಹ್ಮಸ್ವರೂಪವಾಗಿಹ ಪರಮಪ್ರಣವದ ತಾರಕಸ್ವರೂಪದಲ್ಲಿ ಪೃಥ್ವಿಯೆಂಬ ಮಹಾಭೂತವಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಅಪ್ಪುವೆಂಬ ಮಹಾಭೂತವಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ತೇಜವೆಂಬ ಮಹಾಭೂತವಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ವಾಯುವೆಂಬ ಮಹಾಭೂತವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಆಕಾಶವೆಂಬ ಮಹಾಭೂತವಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಆತ್ಮನೆಂಬ ಮಹಾಭೂತವಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಪೃಥ್ವೀರಾಪಃ ಸ್ತಥಾ ತೇಜಃ ವಾಯುಶ್ಚಾಕಾಶ ಚೇತನಃ | ಇತಿ ಷಷ್ಠಭೂತಾನಿ ದೇವೀ ಓಂಕಾರ ಗರ್ಭೆ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.