Index   ವಚನ - 742    Search  
 
ಇನ್ನು ಷಡ್ವಿಧಮುಖಂಗಳ ನಿವೃತ್ತಿ ಅದೆಂತೆಂದಡೆ: ಆ ಪ್ರಣವದ ತಾರಕಸ್ವರೂಪದಲ್ಲಿ ಘ್ರಾಣೇಂದ್ರಿಯವಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಜಿಹ್ವೇಂದ್ರಿಯವಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ನೇತ್ರೇಂದ್ರಿಯವಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ತ್ವಗೇಂದ್ರಿಯವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಶ್ರೋತ್ರೇಂದ್ರಿಯವಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಮನಸ್ಸೇಂದ್ರಿಯವಡಗಿತ್ತು ನೋಡಾ. ಇದಕ್ಕೆ ಚಿತ್ಪ್ರಕಾಶಾಗಮೇ: ಓಂಕಾರ ತಾರಕರೂಪೇ ಘ್ರಾಣೇಂದ್ರಿಯಂ ಲಯಂ ಗತಾ | ಓಂಕಾರ ದಂಡರೂಪೇ ಚ ಜಿಹ್ವೇಂದ್ರಿಯಂ ಲಯಂ ಗತಾ | ಓಂಕಾರ ಕುಂಡಲಾಕಾರೇ ನೇತ್ರಂ ಚ ತತ್ರ ಜಾಯತೇ | ಓಂಕಾರಾರ್ಧಚಂದ್ರೇ ಚ ತ್ವಗೇಂದ್ರಿಯಲಯಂ ಸದಾ | ಓಂಕಾರ ದರ್ಪಣಾಕಾರೇ ಶ್ರೋತ್ರಶ್ಚೈವ ವಿಲೀಯತೇ | ಓಂಕಾರ ಜ್ಯೋತಿರೂಪೇ ಚ ಮಾನಸಂಚ ವಿಲೀಯತೇ | ಇತಿ ಮುಖಂ ಲಯ ಜ್ಞಾತುಂ ಸುಸೂಕ್ಷ್ಮಂ ಶ್ರುಣು ಪಾರ್ವತೀ || ಇಂತೆಂದುದಾಗಿ, ಇದಕ್ಕೆ ಚಕ್ರಾತೀತಾಗಮೇ: ಶ್ರೋತ್ರಂ ತ್ವಗ್ನೇತ್ರಜಿಹ್ವಾ ಚ ಘ್ರಾಣಂ ಚ ಹೃದಯಂ ತಥಾ | ಇತಿ ಷಷ್ಠಮುಖಂ ದೇವಿ ಓಂಕಾರೇ ಚ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.