Index   ವಚನ - 743    Search  
 
ಇನ್ನು ಷಡ್ವಿಧಪರಿಣಾಮದ ನಿವೃತ್ತಿ ಅದೆಂತೆಂದಡೆ: ಪರಬ್ರಹ್ಮಸ್ವರೂಪವಾಗಿಹ ಪರಮಪ್ರಣವದ ತಾರಕಸ್ವರೂಪದಲ್ಲಿ ಗಂಧೇಂದ್ರಿಯವಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ರಸನೇಂದ್ರಿಯವಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ರೂಪೇಂದ್ರಿಯವಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶನೇಂದ್ರಿಯವಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದೇಂದ್ರಿಯವಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ತೃಪ್ತೇಂದ್ರಿಯವಡಗಿತ್ತು ನೋಡಾ. ಇದಕ್ಕೆ ಉತ್ತರವಾತುಲಾಗಮೇ: ಶಬ್ದ ಸ್ಪರ್ಶಂ ಚ ರೂಪಂ ಚ ರಸಗಂಧಸ್ತಥೈವಚ | ಪಂಚೇಂದ್ರಿಯ ಸಹ ತೃಪ್ತಿ ನಾದಸ್ತಾನೇ ವಿಲೀಯತೇ ||'' ಇಂತೆಂದುದಾಗಿ ಅಪ್ರಮಾಣಕೂಡಲಸಂಗಮದೇವಾ.