Index   ವಚನ - 745    Search  
 
ಸ್ವಾಧಿಷ್ಠಾನಚಕ್ರದ ಸಹಸ್ರಾಂಶದಲ್ಲಿ ಆಧಾರಚಕ್ರವಡಗಿತ್ತು. ಮಣಿಪೂರಕಚಕ್ರದ ಸಹಸ್ರಾಂಶದಲ್ಲಿ ಸ್ವಾಧಿಷ್ಠಾನಚಕ್ರವಡಗಿತ್ತು. ಅನಾಹತಚಕ್ರದ ಸಹಸ್ರಾಂಶದಲ್ಲಿ ಮಣಿಪೂರಕಚಕ್ರವಡಗಿತ್ತು. ವಿಶುದ್ಧಿಚಕ್ರದ ಸಹಸ್ರಾಂಶದಲ್ಲಿ ಅನಾಹತಚಕ್ರವಡಗಿತ್ತು. ಆಜ್ಞಾಚಕ್ರದ ಸಹಸ್ರಾಂಶದಲ್ಲಿ ವಿಶುದ್ಧಿಚಕ್ರವಡಗಿತ್ತು. ನಿಷಾದಚಕ್ರದ ಸಹಸ್ರಾಂಶದಲ್ಲಿ ಆಜ್ಞಾಚಕ್ರವಡಗಿತ್ತು. ಸುಷುಪ್ತಿಚಕ್ರದ ಸಹಸ್ರಾಂಶದಲ್ಲಿ ನಿಷಾದಚಕ್ರವಡಗಿತ್ತು. ಬ್ರಹ್ಮಚಕ್ರದ ಸಹಸ್ರಾಂಶದಲ್ಲಿ ಸುಷುಪ್ತಿಚಕ್ರವಡಗಿತ್ತು. ಶಿಖಾಚಕ್ರದ ಸಹಸ್ರಾಂಶದಲ್ಲಿ ಬ್ರಹ್ಮಚಕ್ರವಡಗಿತ್ತು. ಪಶ್ಚಿಮಚಕ್ರದ ಸಹಸ್ರಾಂಶದಲ್ಲಿ ಶಿಖಾಚಕ್ರವಡಗಿತ್ತು. ಅಣುಚಕ್ರದ ಸಹಸ್ರಾಂಶದಲ್ಲಿ ಪಶ್ಚಿಮಚಕ್ರವಡಗಿತ್ತು. ನಿಷ್ಕಲಚಕ್ರದ ಸಹಸ್ರಾಂಶದಲ್ಲಿ ಅಣುಚಕ್ರವಡಗಿತ್ತು. ನಿರಾಳಚಕ್ರದ ಸಹಸ್ರಾಂಶದಲ್ಲಿ ನಿಷ್ಕಳಚಕ್ರವಡಗಿತ್ತು. ಸುರಾಳಚಕ್ರದ ಸಹಸ್ರಾಂಶದಲ್ಲಿ ನಿರಾಳಚಕ್ರವಡಗಿತ್ತು. ಕಲಾಚಕ್ರ ಸಹಸ್ರಾಂಶದಲ್ಲಿ ಸುರಾಳಚಕ್ರವಡಗಿತ್ತು. ಬಿಂದುಚಕ್ರದ ಸಹಸ್ರಾಂಶದಲ್ಲಿ ಕಲಾಚಕ್ರವಡಗಿತ್ತು. ನಾದಚಕ್ರದ ಸಹಸ್ರಾಂಶದಲ್ಲಿ ಬಿಂದುಚಕ್ರವಡಗಿತ್ತು. ಗುರುಚಕ್ರದ ಸಹಸ್ರಾಂಶದಲ್ಲಿ ನಾದಚಕ್ರವಡಗಿತ್ತು. ಚರಚಕ್ರದ ಸಹಸ್ರಾಂಶದಲ್ಲಿ ಗುರುಚಕ್ರವಡಗಿತ್ತು. ಪರಚಕ್ರದ ಸಹಸ್ರಾಂಶದಲ್ಲಿ ಚರಚಕ್ರವಡಗಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ: ಸ್ವಾಧಿಷ್ಠಾನ ಸಹಸ್ರಾಂಶೇ ಆಧಾರಶ್ಚ ವಿಲೀಯತೇ | ಮಣಿಪೂರ ಸಹಸ್ರಾಂಶೇ ಸ್ವಾಧಿಷ್ಟಂ ಚಕ್ರ ಲೀಯತೇ || ಹೃಚ್ಚಕ್ರ ಸಹಸ್ರಾಂಶೇ ಮಣಿಪೂರಂ ಲೀಯತೇ ತಥಾ | ವಿಶುದ್ಧಿಶ್ಚ ಸಹಸ್ರಾಂಶೇ ಹೃತ್ಕಂಜ ತಥಾ ಲಯಂ || ಅಜ್ಞಾನಚಕ್ರ ಸಹಸ್ರಾಂಶೇ ವಿಶುದ್ಧಿಶ್ಚ ವಿಲೀಯತೇ | ನಿಷಾದಸ್ಯ ಸಹಸ್ರಾಂಶೇ ಆಜ್ಞಾಚಕ್ರಂ ಚ ಲೀಯತೇ || ಸುಪ್ತಿಚಕ್ರಸಹಸ್ರಾಂಶೇ ನಿಷಾದಂ ಲೀಯತೇ ತಥಾ | ವಿಶುದ್ಧಿಶ್ಚ ಸಹಸ್ರಾಂಶೇ ವಿಶುದ್ಧಿಚಕ್ರಂ ಲೀಯತೇ || ಬ್ರಹ್ಮಚಕ್ರ ಸಹಸ್ರಾಂಶೇ ಸುಷುಪ್ತಿಚಕ್ರಂ ಲೀಯತೇ | ಶಿಖಾಚಕ್ರ ಸಹಸ್ರಾಂಶೇ ಬ್ರಹ್ಮಚಕ್ರಂ ಚ ಲೀಯತೇ || ಪಶ್ಚಿಮಚಕ್ರ ಸಹಸ್ರಾಂಶೇ ಶಿಖಾಚಕ್ರಶ್ಚ ಲೀಯತೇ | ಅಣುಚಕ್ರ ಸಹಸ್ರಾಂಶೇ ಪಶ್ಚಿಮಚಕ್ರ ಲೀಯತೇ || ನಿಷ್ಕಳಸ್ಯ ಸಹಸ್ರಾಂಶೇ ಅಣುಚಕ್ರಶ್ಚ ಲೀಯತೇ | ನಿರಾಳಸ್ಯ ಸಹಸ್ರಾಂಶೇ ನಿಷ್ಕಳಚಕ್ರ ಲೀಯತೇ || ಸುರಾಳಸ್ಯ ಸಹಸ್ರಾಂಶೇ ಸುರಾಳಶ್ಚಕ್ರ ಲೀಯತೇ | ಕಲಾಚಕ್ರ ಸಹಸ್ರಾಂಶೇ ಸುರಾಳಶ್ಚಕ್ರ ಲೀಯತೇ || ಬಿಂದುಚಕ್ರ ಸಹಸ್ರಾಂಶೇ ಕಲಾಚಕ್ರಂ ವಿಲೀಯತೇ | ನಾದಚಕ್ರ ಸಹಸ್ರಾಂಶೇ ಬಿಂದುಚಕ್ರಂ ಚ ಲೀಯತೇ || ಗುರುಚಕ್ರ ಸಹಸ್ರಾಂಶೇ ನಾದಚಕ್ರಂ ಚ ಲೀಯತೇ | ಚರಚಕ್ರ ಸಹಸ್ರಾಂಶೇ ಗುರುಚಕ್ರಂ ಚ ಲೀಯತೇ | ಪರಚಕ್ರ ಸಹಸ್ರಾಂಶೇ ಚರಚಕ್ರಶ್ಚ ಲೀಯತೇ | ಇತಿ ಚಕ್ರ ಲಯಂ ಜ್ಞಾನಂ ಸುಸೂಕ್ಷ್ಮಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.