ಇನ್ನು ಷಡ್ವಿಧಸಾದಾಖ್ಯಂಗಳ ನಿವೃತ್ತಿ ಅದೆಂತೆಂದಡೆ:
ನಿವೃತ್ತಿಕಲೆಯಲ್ಲಿ ಕರ್ಮಸಾದಾಖ್ಯವಡಗಿತ್ತು.
ಪ್ರತಿಷ್ಠಾಕಲೆಯಲ್ಲಿ ಕರ್ತೃಸಾದಾಖ್ಯವಡಗಿತ್ತು.
ವಿದ್ಯಾಕಲೆಯಲ್ಲಿ ಮೂರ್ತಸಾದಾಖ್ಯವಡಗಿತ್ತು.
ಶಾಂತಿಕಲೆಯಲ್ಲಿ ಅಮೂರ್ತಸಾದಾಖ್ಯವಡಗಿತ್ತು.
ಶಾಂತ್ಯತೀತಕಲೆಯಲ್ಲಿ ಶಿವಸಾದಾಖ್ಯವಡಗಿತ್ತು.
ಶಾಂತ್ಯತೀತೋತ್ತರಕಲೆಯಲ್ಲಿ ನಿರ್ಮುಕ್ತಿಯೆಂಬ
ಮಹಾಸಾದಾಖ್ಯವಡಗಿತ್ತು ನೋಡಾ.
ಇದಕ್ಕೆ ಉತ್ತರವಾತುಲಾಗಮೇ:
ಕರ್ಮಸಾದಾಖ್ಯಂ ಚೈವಂ ನಿವೃತ್ತೇಚ ವಿಲೀಯತೇ |
ಕರ್ತೃಕಂ ನಾಮ ಸಾದಾಖ್ಯಂ ಪ್ರತಿಷ್ಠೇ ಚ ವಿಲೀಯತೇ ||
ಮೂರ್ತಸಾದಾಖ್ಯಕಂ ಚೈವ ವಿದ್ಯಾಕಲೆ ವಿಲೀಯತೇ |
ಅಮೂರ್ತನಾಮ ಸಾದಾಖ್ಯಂ ಶಾಂತಿಕಲಾಯಾಂ ಲೀಯತೇ |
ಶಿವಸಾದಾಖ್ಯಕಂ ಚೈವ ಶಾಂತ್ಯತೀತೋತ್ತರೇ ಲಯಃ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍvidhasādākhyaṅgaḷa nivr̥tti adentendaḍe:
Nivr̥ttikaleyalli karmasādākhyavaḍagittu.
Pratiṣṭhākaleyalli kartr̥sādākhyavaḍagittu.
Vidyākaleyalli mūrtasādākhyavaḍagittu.
Śāntikaleyalli amūrtasādākhyavaḍagittu.
Śāntyatītakaleyalli śivasādākhyavaḍagittu.
Śāntyatītōttarakaleyalli nirmuktiyemba
mahāsādākhyavaḍagittu nōḍā.
Idakke uttaravātulāgamē:
Karmasādākhyaṁ caivaṁ nivr̥ttēca vilīyatē |
kartr̥kaṁ nāma sādākhyaṁ pratiṣṭhē ca vilīyatē ||
mūrtasādākhyakaṁ caiva vidyākale vilīyatē |
Amūrtanāma sādākhyaṁ śāntikalāyāṁ līyatē |
śivasādākhyakaṁ caiva śāntyatītōttarē layaḥ ||''
intendudāgi,
apramāṇakūḍalasaṅgamadēvā.