Index   ವಚನ - 754    Search  
 
ಇನ್ನು ಷಡ್ವಿಧಕಲೆಗಳ ನಿವೃತ್ತಿ ಅದೆಂತೆಂದಡೆ: ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪದಲ್ಲಿ ನಿವೃತ್ತಿಕಲೆಯಡಗಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಪ್ರತಿಷ್ಠಾಕಲೆ ಅಡಗಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾಕಲೆಯಡಗಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿಕಲೆಯಡಗಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತಕಲೆಯಡಗಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಶಾಂತ್ಯತೀತೋತ್ತರ ಕಲೆಯಡಗಿತ್ತು. ಇದಕ್ಕೆ ಅಖಂಡಾಗಮೇ: ಓಂಕಾರ ತಾರಕಾರೂಪೇ ನಿವೃತ್ತಿಶ್ಚ ವಿಲೀಯತೇ | ಓಂಕಾರ ದಂಡರೂಪೇ ಚ ಪ್ರತಿಷ್ಠಾ ಲೀಯತೇ ತಥಾ || ಓಂಕಾರ ಕುಂಡಲಾಕಾರೇ ಕಲಾವಿದ್ಯಾ ವಿಲೀಯತೇ | ಓಂಕಾರ ಅರ್ಧಚಂದ್ರೇ ಚ ಕಲಾ ಶಾಂತಿರ್ವಿಲೀಯತೇ | ಓಂಕಾರ ದರ್ಪಣಾಕಾರೇ ಶಾಂತ್ಯತೀತಂ ಚ ಲೀಯತೇ | ಓಂಕಾರ ಜ್ಯೋತಿಸ್ವರೂಪೇ ಚ ಶಾಂತ್ಯತೀತೋತ್ತರಂ ಲಯಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ: ನಿವೃತ್ತಿಃ ಪ್ರತಿಷ್ಠಾ ಚೈವ ವಿದ್ಯಾ ಶಾಂತಿಕಲಾಸ್ತಥಾ | ಶಾಂತ್ಯತೀತ ಕಲಾ ಚೈವ ಶಾಂತ್ಯತೀತೋತ್ತರಂ ತಥಾ | ಇತಿ ಷಷ್ಠಕಲಾ ದೇವಿ ಓಂಕಾರೇ ಚ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.