Index   ವಚನ - 756    Search  
 
ಇನ್ನು ನವಶಕ್ತಿಗಳ ನಿವೃತ್ತಿ ಅದೆಂತೆಂದಡೆ: ಕಾಕಿನಿಶಕ್ತಿ ರಾಕಿನಿಶಕ್ತಿಯಲ್ಲಿ ಅಡಗಿದಳು. ಆ ರಾಕಿನಿಶಕ್ತಿ ಲಾಕಿನಿಶಕ್ತಿಯಲ್ಲಿ ಅಡಗಿದಳು. ಆ ಲಾಕಿನಿಶಕ್ತಿ ಶಾಕಿನಿಶಕ್ತಿಯಲ್ಲಿ ಅಡಗಿದಳು. ಆ ಶಾಕಿನಿಶಕ್ತಿ ಡಾಕಿನಿಶಕ್ತಿಯಲ್ಲಿ ಅಡಗಿದಳು. ಆ ಡಾಕಿನಿಶಕ್ತಿ ಹಾಕಿನಿಶಕ್ತಿಯಲ್ಲಿ ಅಡಗಿದಳು. ಆ ಹಾಕಿನಿಶಕ್ತಿ ನಿರ್ಮಾಯಶಕ್ತಿಯಲ್ಲಿ ಅಡಗಿದಳು. ಆ ನಿರ್ಮಾಯಶಕ್ತಿ ನಿಭ್ರಾಂತಶಕ್ತಿಯಲ್ಲಿ ಅಡಗಿದಳು. ಆ ನಿಭ್ರಾಂತಿಶಕ್ತಿ ನಿರ್ಭಿನ್ನಶಕ್ತಿಯಲ್ಲಿ ಅಡಗಿದಳು. ಆ ನಿರ್ಭಿನ್ನಶಕ್ತಿ ಏನೂ ಎನಲಿಲ್ಲದ ಪರಬ್ರಹ್ಮದ ನೆನಹುಮಾತ್ರದಲ್ಲಿ ಅಡಗಿದಳು. ಏನೂ ಏನೂ ಎನಲಿಲ್ಲದ ಪರಬ್ರಹ್ಮದ ನೆನಹು ಅಡಗಿ ನಿಃಶೂನ್ಯವಾಯಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ರಾಕಿನ್ಯಾಶ್ಚ ಮನೋಜ್ಞಾನಾತ್ ಕಾಕಿನೀಶಕ್ತಿ ಲೀಯತೇ | ಲಾಕಿನ್ಯಾಶ್ಚ ಮನೋಜ್ಞಾನಾತ್ ರಾಕಿನೀಶಕ್ತಿ ಲೀಯತೇ | ಶಾಕಿನ್ಯಾಶ್ಚ ಮನೋಜ್ಞಾನಾತ್ ಲಾಕಿನೀಶಕ್ತಿ ಲೀಯತೇ | ಡಾಕಿನ್ಯಾಶ್ಚ ಮನೋಜ್ಞಾನಾತ್ ಶಾಕಿನ್ಯಾಶ್ಚಕ್ತಿಲೀಯತೇ | ಹಾಕಿನ್ಯಾಶ್ಚ ಮನೋಜ್ಞಾನಾತ್ ಡಾಕಿನೀಶಕ್ತಿ ಲೀಯತೇ | ನಿರ್ಮಾಯೋಃ ಮನೋಜ್ಞಾನಾತ್ ಡಾಕಿನೀಶಕ್ತಿ ಲೀಯತೇ || ನಿಭ್ರಾಂತುಃ ಮನೋಜ್ಞಾನಾತ್ ನಿರ್ಮಾಯಶಕ್ತಿ ಲೀಯತೇ || ನಿರ್ಭಿನ್ನಾಃ ಮನೋಜ್ಞಾನಾತ್ ನಿಭ್ರಾಂತಶಕ್ತಿ ಲೀಯತೇ || ಪರಬ್ರಹ್ಮ ಮನೋಜ್ಞಾನಾತ್ ಪರಬ್ರಹ್ಮೇ ಲೀಯತೇ | ಏಕೈಕ ಪ್ರಣವಾಖ್ಯಾತಂ ಏಕೈಕಂತು ವಿಲೀಯತೇ |'' ಇದಕ್ಕೆ ಶ್ರುತಿ: ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.