Index   ವಚನ - 764    Search  
 
ಭಕಾರವೇ ಜ್ಞಾನಸ್ವರೂಪ ತಕಾರವೇ ತತ್ವಸ್ವರೂಪ ತತ್ವಜ್ಞಾನಸ್ವರೂಪವ ಬಲ್ಲಾತನೆ ಭಕ್ತನು; ಆತನೆ ಪರಶಿವಮೂರ್ತಿ. ತತ್ವಜ್ಞಾನಸ್ವರೂಪನರಿಯದೆ ಭಕ್ತರೆಂಬರು, ಅವರಿಗೆ ಭಕ್ತಸ್ಥಲವಿಲ್ಲ ನೋಡಾ. ಭಕ್ತಸ್ಥಲವಿಲ್ಲದವರಿಗೆ ಲಿಂಗಸ್ಥಲವಿಲ್ಲ. ಭಕ್ತ-ಲಿಂಗಸ್ಥಲವಿಲ್ಲದವರಿಗೆ ಮೋಕ್ಷವಿಲ್ಲ ನೋಡಾ. ಇದಕ್ಕೆ ಈಶ್ವರೋsವಾಚ: ಭಕಾರಂ ಜ್ಞಾನರೂಪಂ ಚ ತಕಾರಂ ತತ್ವರೂಪಕಂ | ತತ್ವಜ್ಞಾನದ್ವಯಜ್ಞಾನಂ ಶಿವಭಕ್ತೋ ಮಹೇಶ್ವರಿ | ನಾಮಧಾರಕ ಭಕ್ತಾನಾಂ ನಾಮಧಾರಕಲಿಂಗಯೋ | ಭಕ್ತಲಿಂಗ ದ್ವಯಂ ನಾಸ್ತಿ ನಾಸ್ತಿ ಮೋಕ್ಷಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.