Index   ವಚನ - 773    Search  
 
ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳು ನೀವು ಕೇಳಿರೆ: ದಾಸಿಯ ಸಂಗವುಳ್ಳನ್ನಕ್ಕ ಗುರುವಲ್ಲ, ವೇಶಿಯಸಂಗವುಳ್ಳನ್ನಕ್ಕ ಲಿಂಗವಲ್ಲ, ಪರಸ್ತ್ರೀಯ ಸಂಗವುಳ್ಳನ್ನಕ್ಕ ಜಂಗಮವಲ್ಲ. ಈ ತ್ರಿವಿಧಸಂಗವುಳ್ಳನ್ನಕ್ಕ ಗುರುಲಿಂಗಜಂಗಮವೆಂದು ಸುಳಿದರೆ ಇಪ್ಪತ್ತೆಂಟುಕೋಟಿ ನರಕ ತಪ್ಪದು ನೋಡಾ. ಇದಕ್ಕೆ ವೀರಾಗಮೇ: ದಾಸಿವೇಶಿಪರಸ್ತ್ರೀಣಾಂ ತ್ರಿವಿಧ ಸಂಗಯೋಗಾಯಃ | ಅಷ್ಟವಿಂಶತಿ ಕೋಟ್ಯಸ್ತು ನರಕೇ ಕಾಲಮಕ್ಷಯಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.