Index   ವಚನ - 781    Search  
 
ಮಂತ್ರ ಹನ್ನೊಂದನರಿಯರು ಆಚಾರ್ಯರೆಂಬರು. ಪದ ತೊಂಬತ್ತನರಿಯರು ಆಚಾರ್ಯರೆಂಬರು. ವರ್ಣ ಐವತ್ತೆರಡನರಿಯರು ಆಚಾರ್ಯರೆಂಬರು. ಭುವನ ಇನ್ನೂರಿಪ್ಪತ್ತುನಾಲ್ಕನರಿಯರು ಆಚಾರ್ಯರೆಂಬರು. ತತ್ವ ಮೂವತ್ತಾರನರಿಯರು ಆಚಾರ್ಯರೆಂಬರು. ಮೂವತ್ತೆಂಟು ಕಲೆಗಳನರಿಯರು ಆಚಾರ್ಯರೆಂಬರು. ಅರವತ್ತುನಾಲ್ಕು ಕಲೆ ಜ್ಞಾನವನರಿಯರು ಆಚಾರ್ಯರೆಂಬರು. ಅಲ್ಲಲ್ಲ ನೋಡಾ, ಅವ ಅನಾಚಾರ್ಯನೆಂದು ಆದಿವೇದಂಗಳು ಹೇಳುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.