Index   ವಚನ - 780    Search  
 
ಮಕಾರದೊಳಗೆ ಮಕಾರವನರಿಯರು ಮಕಾರದೊಳಗೆ ಅಕಾರವನರಿಯರು ಮಕಾರದೊಳಗೆ ಉಕಾರವನರಿಯರು ಮಕಾರದೊಳಗೆ ಓಂಕಾರವನರಿಯರು. ಮಕಾರದೊಳಗೆ ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನರಿಯದೆ ಗುರುಲಿಂಗಜಂಗಮವೆಂದು ಸುಳಿದಡೆ ಕುಂಭೀಪಾತಕವೆಂದು ಶ್ರುತಿಗಳು ಸಾರುತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.